ಶ್ರಮಿಕ

ಕವಿತೆ ಶ್ರಮಿಕ ಡಾ.ಜಿ.ಪಿ.ಕುಸುಮ, ಮುಂಬಯಿನನ್ ತಾಯಿ….ನೀ ಗೆಲ್ಲಬೇಕೆಂದುನಾ ನಿಂತೆ ಒಳಗೆ.ದೂರ ದೂರದವರೆಗೆಯಾರೂ ಇಲ್ಲ ಹೊರಗೆ.ಗಲ್ಲಿಗಲ್ಲಿಗಳಲ್ಲಿ ಮೌನ ಮಲಗಿದೆಮಣ್ಣು ಒಣಗಿದೆ.ನನ್ನೆದೆ ಗೂಡು ಒದ್ದೆಯಾಗ್ತಿದೆನಿನ್ನ ಬಿಟ್ಟು ಹೋಗೊಕಾಗಲ್ಲಹೋದ್ರೆ ಹೋದಲ್ಲಿಬದುಕೋಕಾಗಲ್ಲ.ನನ್ನ ದಿನ, ನನ್ನ ರಾತ್ರಿನನ್ನ ಸೋಲು, ನನ್ನ ಗೆಲುವುಎಲ್ಲವೂ ನೀನೆ..ನೀ ಯಾವತ್ತೂ ಹೀಗೆಮನೆಬಾಗಿಲು ಮುಚ್ಕೊಂಡುಮೂಕಿಯಾಗಿದ್ದಿಲ್ಲ.ಅಂಗಾಂಗ ಸುಟ್ಟುಕೊಂಡಾಗ್ಲೂಮಳೆನೀರು ಮುಳಗಿಸಿದಾಗ್ಲೂಭಯ ಗೆದ್ದಿಲ್ಲ…ಇದೀಗ ಏನಾಯ್ತೋ ತಾಯಿಕಾಣದ ವೈರಿಗೆಎಷ್ಟೊಂದು ಸೊರಗಿದೆ.ಹಳಿತಪ್ಪಿದೆ ನೋಡು ಬದುಕಬಂಡಿಸ್ವಪ್ನನಗರಿಯಲ್ಲೀಗಬದುಕು ಘಮಘಮಿಸುವುದಮರೆತಿದೆ.ಬರಿಗಾಲಲಿ ಬರಿಕಿಸೆಯಲಿಬರಿಹೊಟ್ಟೆಗೆ ಕೈಯನಿಟ್ಟುನೆತ್ತಿಮೇಲೆರಡು ಪ್ಯಾಂಟು ಶರ್ಟುರಾಶಿ ಬಿಸಿಲ ಸೀಳಿಕಾಲನ್ನೆತ್ತಿ ಹಾಕುತಸಾಗ್ತೇನೆ ನಾನುಹೊಸ ಕನಸುಗಳ ನೇಯಲುತೀರ ಬಿಟ್ಟುಸಾಗರವ ದಾಟಲು. ***************************